ಸದಸ್ಯತ್ವಕ್ಕಾಗಿ ಅರ್ಜಿ ಸಲ್ಲಿಸಿ

Address / ವಿಳಾಸ

Terms and Conditions / ಸದಸ್ಯರಾಗುವವರಿಗೆ ಷರತ್ತುಗಳು:

  1. ನಾನು ಅಖಿಲ ಕರ್ನಾಟಕ ಡಿ.ಕೆ. ಶಿವಕುಮಾರ್ ಅಭಿಮಾನಿಗಳ ಸಂಘದ ಸದಸ್ಯನಾಗಿ / ಸದಸ್ಯಳಾಗಿ ಸೇರಲು ಬಯಸುತ್ತೇನೆ. ನಾನು ಸಂಘದ ಧ್ಯೇಯ, ನಿಯಮ ಉದ್ದೇಶಗಳಿಗೆ ಬದ್ಧನಾಗಿರುತ್ತೇನೆ ಮತ್ತು ಸಂಘದ ಪ್ರಾಥಮಿಕ ಸದಸ್ಯನಾಗಿರುತ್ತೇನೆ.
  2. ನಾನು ಅಪರಾಧ ಕೃತ್ಯಗಳಂತಹ ಚಟುವಟಿಕೆಗಳಿಗೆ ಭಾಗಿಯಾಗದೆ ಹಾಗು ಸಂಘದ ಹೆಸರನ್ನು ದುರುಪಯೋಗ ಪಡಿಸಿಕೊಳ್ಳದೆ ಸದಾ ಸಮಾಜ ಸೇವೆಗಾಗಿ ಹಗಲಿರುಳು ದುಡಿಯುತ್ತೇನೆ.
  3. ನಾನು ಪ್ರಜಾ ತಂತ್ರ ಮತ್ತು ಜಾತ್ಯತೀತ ಮೌಲ್ಯಗಳನ್ನು ಗೌರವಿಸುತ್ತೇನೆ ಮತ್ತು ಅವುಗಳನ್ನು ಎತ್ತಿ ಹಿಡಿಯಲು ಶ್ರಮಿಸುತ್ತೇನೆ, ಸಂಘದ ವೇದಿಕೆಗಳಲ್ಲಿ ಹೊರತುಪಡಿಸಿ ಇನ್ಯಾವುದೇ ಇತರ ಸ್ಥಳಗಳು,ಸಂದರ್ಭಗಳಲ್ಲಿ ನೇರವಾಗಿ ಅಥವಾ ಪರೋಕ್ಷವಾಗಿ, ಸಾರ್ವಜನಿಕವಾಗಿ ಇತರೆ ವೇದಿಕೆಗಳಲ್ಲಿ ಸಂಘದ ಬಗ್ಗೆ ಟೀಕಿಸುವುದಿಲ್ಲ ಅಥವಾ ಖಂಡಿಸುವುದಿಲ್ಲ ಎಂದು ಪ್ರಮಾಣ ಮಾಡುತ್ತೇನೆ.
  4. ಸಂಘದ ನೀತಿ ನಿಯಮಗಳಿಗೆ ಬದ್ಧನಾಗಿರುತ್ತೇನೆ. ಸದಸ್ಯತ್ವದ ಶುಲ್ಕ ರೂ ೨೫ ಈ ಮೂಲಕ ನೀಡುತ್ತಿದ್ದೇನೆ.
  5. ನಾನು ಅಸ್ಪರ್ಶತೆಯನ್ನು ಒಪ್ಪುವುದಿಲ್ಲ ಯಾವ ಕಾರಣಕ್ಕೂ ಅದನ್ನು ಅನುಸರಿಸುವುದಿಲ್ಲ ಅದನ್ನು ಹೋಗಲಾಡಿಸಲು ಪ್ರಯತ್ನಿಸುತ್ತೇನೆ.
  6. ನಾನು ವರದಕ್ಷಿಣೆಯನ್ನು ಸ್ವೀಕರಿಸುವುದಿಲ್ಲ ಅದಕ್ಕೆ ಪ್ರೋತ್ಸಾಹ ನೀಡುವುದಿಲ್ಲ ಅದನ್ನು ಹೋಗಲಾಡಿಸಲು ಪ್ರಾಮಾಣಿಕವಾಗಿ ಪ್ರಯತ್ನಿಸುತ್ತೆನೆ.
  7. ಸಂಘದ ಸದಸ್ಯತ್ವ ಪಡೆಯುವ ಮೊದಲು ಶ್ರೀ ಡಿ ಕೆ ಶಿವಕುಮಾರವರ ಹೆಸರಿನಲ್ಲಿ ಸಂಘವನ್ನು ನೋಂದಣಿ ಮಾಡಿರುವುದಿಲ್ಲ ಮಾಡಿದರೆ ನಿಮ್ಮ ಸಂಘದಲ್ಲಿ ಸೇರಿಸುತ್ತೆನೆ.